ಪರಿಪೂರ್ಣತೆ -
ಪರಿಪೂರ್ಣತೆ ಎಂದರೆ ಸಂಪೂರ್ಣತೆ, ಎಲ್ಲ ವಿಧದಲ್ಲೂ ಪೂರ್ಣವಾಗಿರುವಿಕೆ. ಇದನ್ನು ಮಾನವನಲ್ಲಿ ಕಾಣಲು ಸಾಧ್ಯವೆ ಇಲ್ಲವೆಂಬುದು ಹಿಂದೂಗಳ ಸಾಮಾನ್ಯಭಿಪ್ರಾಯ. ಪರಬ್ರಹ್ಮಪರಮಾತ್ಮಭಗವಂತನಲ್ಲಿ ಮಾತ್ರ ಪರಿಪೂರ್ಣತೆಯಿರುವುದು ಸಾಧ್ಯ. ಅವನೊಬ್ಬನೇ ಎಲ್ಲ ದೃಷ್ಟಿಯಿಂದಲೂ ಪರಿಪೂರ್ಣ. ಪೂರ್ಣಮದಃ ಪೂರ್ಣಮಿದಂ ಪೂರ್ಣಾತ್ ಪೂರ್ಣಮುದಚ್ಯತೇ ಪೂರ್ಣಸ್ಯ ಪೂರ್ಣಮಾದಾಯ ಪೂರ್ಣಮೇವಾಶಿಷ್ಯತೇ- ಎಂಬ ಮಂತ್ರದ ತಾತ್ಪರ್ಯವೂ ಅದೇ. ಮಾನವ ಇಹಲೋಕದಲ್ಲಿ ಪ್ರಯತ್ನಪಟ್ಟರೂ ಪರಿಪೂರ್ಣತೆಯನ್ನು ಪಡೆಯಲಾರ. ಆದರೆ ಭಗವತ್ಕøಪೆಯಿಂದ ಭಗವತ್ಸಾಯುಜ್ಯವನ್ನು ಪರಿಪೂರ್ಣತೆಯನ್ನು ಪಡೆಯಲಾರ. ಆದರೆ ಭಗವತ್ಕøಪೆಯಿಂದ ಭಗವತ್ಸಾಯುಜ್ಯವನ್ನು ಪಡೆದರೆ ಆಗ (ವಿಶಿಷ್ಟಾದ್ವೈತರೀತ್ಯಾ) ಪರಮಪದದಲ್ಲಿ ಅವನು ಭಗವಂತನಿಗೆ ಸಮನಾದ ರೂಪಾದಿಗಳನ್ನು ಪಡೆದ ಒಂದು ರೀತಿಯಲ್ಲಿ ಪರಿಪೂರ್ಣನಾಗುತ್ತಾನೆ.

ಕ್ರೈಸ್ತಮತರೀತ್ಯಾ ಪರಿಪೂರ್ಣತೆ ಮತೀಯ ಅರ್ಥವುಳ್ಳ ಒಂದು ಪಾರಿಭಾಷಾಪದ ಮಾನವ ತನ್ನ ಪಾತಕಗಳಿಂದಲೂ ದೌರ್ಬಲ್ಯಗಳಿಂದಲೂ ವಿಮಕ್ತಿ ಪಡೆಯುವುದೇ ಪರಿಪೂರ್ಣತೆ ಇದನ್ನು ಇಹಲೋಕದಲ್ಲಿ ಪಡೆಯುವುದು ಸಾಧ್ಯವೇ- ಎಂದು ಶಂಕಿಸುವ ಕ್ರೈಸ್ತರೂ ಇಲ್ಲದಿಲ್ಲ. ಪರಿಪೂರ್ಣತೆ ಅಭಾವಾತ್ಮಕವಾಗಿ ಪಾಪವಿಮುಕ್ತಿಯೂ ಆಗಬಹುದು ; ಭಾವಾತ್ಮಕವಾಗಿ ಪುಣ್ಯ ಸಂಚಯವೂ ಆಗಬಹುದು. ಪಾತಕದ ಎರಡು ಬಗೆ. ಒಂದು ಮೂಲಪಾತಕ ಇದು ಕ್ರೈಸ್ತಮತದೀಕ್ಷೆ ಕೈಗೊಂಡಾಗ ತನಗೆ ತಾನೇ ನಷ್ಟವಾಗಿ ಹೋಗುತ್ತದೆ. ಎರಡನೆಯದು ದೀಕ್ಷಾ ಸ್ವೀಕಾರನಂತರದ ಪಾತಕ. ಇದು ಕ್ರಿಸ್ತನ ಪುಣ್ಯಗಳಿಂದ ಕ್ಷಮಿಸಲ್ಪಡುತಕ್ಕದ್ದು. ಪಾರಮಾರ್ಥಿಕ ಸಾಧನಗಳನ್ನೇ ವೃತ್ತಿಯಾಗಿ ಉಳ್ಳವರು ಅದರಿಂದಲೇ ಪರಿಪೂರ್ಣತೆಯನ್ನು ಗಳಿಸಿಕೊಳ್ಳಲು ಸಾಧ್ಯವಾಗಬಹುದು.

ಸಂತ ತಾಮಸ್ ಅಕ್ವಿನಾಸ್‍ನ ಅಭಿಪ್ರಾಯದಲ್ಲಿ ದೇವರಲ್ಲಿ ಪ್ರೀತಿಯಿಡುವುದೇ ಪರಿಪೂರ್ಣತೆಯ ಆಂತರ್ಯ. ಈ ಜೀವಮಾನದಲ್ಲಿ ಅಂಥ ಪ್ರೀತಿಯ ಮಾರ್ಗದಲ್ಲಿ ಬರಬಹುದಾದ ಎಡರುಗಳನ್ನು ನಿವಾರಿಸುವುದರಿಂದಲೂ ಒಂದು ರೀತಿಯ ಪರಿಪೂರ್ಣತೆಯನ್ನು ಸಾಧಿಸಬಹುದು. ಆದರೆ ಈ ಪರಿಪೂರ್ಣತೆ ಸ್ವರ್ಗದಲ್ಲಿ ಲಭಿಸುವ ಪರಿಪೂರ್ಣತೆಗೆ ಎಂದೂ ಸಮನಾಗಲಾರದು. ಪ್ರಾಯಶಃ ಎಲ್ಲರೂ ಪಾತಕಿಗಳೇ ಆದ್ದರಿಂದ ಈ ಲೋಕದಲ್ಲಿ ಪರಿಪೂರ್ಣತೆ ಸಾಧ್ಯವೇ ಆಗದೆಂಬುದು ಸುಧಾರಕರ ಅಭಿಪ್ರಾಯ ಆದರೆ ಬೈಬಲಿನಲ್ಲಿ ಪರಿಪೂರ್ಣತೆ ಉಕ್ತನಾಗಿರುವುದರಿಂದ ಅದು ಇಲ್ಲಿ ಈಗಲೇ ಸಾಧ್ಯವಾಗತಕ್ಕದ್ದೆಂದು ಪ್ರಾಜ್ಞ ವೆಸ್ಲಿ ಕರ್ಮಠರಾದ ಕ್ರೈಸ್ತರಿಗೆ ತಿಳಿಯಹೇಳುತ್ತಿದ್ದ. ಹುಸೈಟ್ಸ್ ಮುಂತಾದ ಇನ್ನೂ ಕೆಲವು ಅಭಿಪ್ರಾಯವೂ ಇದೇ.

ಅನೇಕ ಅತೀಂದ್ರಿಯ ಪ್ರಜ್ಞರು ದೇವರೊಡನೆ ಏಕೀಭಾವ ಹೊಂದುವುದರಿಂದ ಪಾಪ ಪರಿಹಾರ ಸಾಧ್ಯವೆಂದೂ ಅದು ದೇವರ ಅನಿರೀಕ್ಷಿತ ಪ್ರಸಾದವಾಗಿ ಲಭ್ಯವಾಗುವುದೆಂದೂ ಭಾವಿಸುತ್ತಾರೆ. ಇದೇ ಭಾವನೆ ಪ್ರಶಾಂತತಾವಾದಿಗಳಲ್ಲೂ ಕೆಲವು ಪಾದ್ರಿಗಳಲ್ಲೂ ಇದೆ ಜಾನ್ ಫಾಕ್ಸ್ ಸ್ಥಾಪಿಸಿದ ಮಿತ್ರಮಂಡಲಿಯವರು (ಕ್ವೇಕರ್ಸ್) ನಮ್ಮಲ್ಲಿನ ಅಂತಜ್ರ್ಯೋತಿಯನ್ನು ನಿಷ್ಠೆಯಿಂದ ಅವಲಂಬಿಸಿದರೆ ಪಾಪ ವಿಮುಕ್ತಿಯಾಗುತ್ತದೆಂದು ನಂಬುತ್ತಾರೆ ದೇವವಿದ್ಯಾವಾದಿಗಳೂ (ತಿಯಾಸೊಫಿಸ್ಟ್ಸ್) ಬೌದ್ಧರ ಸಮಗ್ರ ಪಾಪ ವಿಮುಕ್ತಿ ಒಂದೇ ಜನ್ಮದಲ್ಲಿ ಕೆಲವು ವಿಶಿಷ್ಟ ಸಂದರ್ಭಗಳಲ್ಲಿ ಸಾಧ್ಯವೆಂದು ಭಾವಿಸಿರುವುದು ಗಮನಾರ್ಹ.

ಕ್ರೈಸ್ತ ಪರಿಪೂರ್ಣತಾ ವಾದಿಗಳು (ಪರ್‍ಫೆಕ್ಷನಿಸ್ಟ್ಸ್) ಕಮ್ಯೂನಿಷ್ಟರೆಂದು ಕರೆಯಲ್ಪಡುತ್ತಾರೆ.      
(ಎಸ್.ಆರ್.ಎ.ಎನ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ